ಡಾ|| ಜಿ ಕೃಷ್ಣಪ್ಪ ಅವರ ಕಿರು ಪರಿಚಯ

ಕನ್ನಡ ನಾಡು ನುಡಿಯ ಬಗ್ಗೆ ಸಂಕೀರ್ಣ ರೀತಿಯಲ್ಲಿ ಕಾರ್ಯ ನಡೆಸುತ್ತಿರುವ ಡಾ. ಜಿ. ಕೃಷ್ಣಪ್ಪನವರ ಪರಿಚಯ ವಿವರ

ಹೆಸರು : ಡಾ|| ಜಿ. ಕೃಷ್ಣಪ್ಪ
ಹುಟ್ಟಿದ ಸ್ಥಳ, ತಾರೀಖು : ಬೆಂಗಳೂರು, ೨೦-೧೦-೧೯೪೮
ತಂದೆ : ಶ್ರೀ ಎಚ್. ಗಂಗಯ್ಯ
ತಾಯಿ : ಶ್ರೀಮತಿ ಸಾವಿತ್ರಮ್ಮ
ವಿಳಾಸ : ನಂ. ೨೨, ಶ್ರೀಗುರುದತ್ತ ನಿಲಯ, ೧ನೆಯ ಅಡ್ಡರಸ್ತೆ, ನೇತಾಜಿನಗರ ಮತ್ತಿಕೆರೆ, ಬೆಂಗಳೂರು-೫೬೦೦೫೪ ಮೊಬೈಲ್ : ೯೯೭೨೧೦೯೨೦೯

ದ.ರಾ. ಬೇಂದ್ರೆ ಕಾವ್ಯ ಮುಖೇನ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ, ಜನಗಳಲ್ಲಿ ಕನ್ನಡ ಸಾಹಿತ್ಯ ಅಭಿರುಚಿಯನ್ನು ಉಂಟು ಮಾಡುತ್ತಿರುವುದು. ಬೇಂದ್ರೆ ಕಾವ್ಯವಿಮರ್ಶಕರಾಗಿರುವುದು

• ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಧಾರವಾಡ, ಬೀದರ್, ಕೊಡಗು, ಹಾಸನ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಗುಲ್ಬರ್ಗ, ಯಾದಗೀರ್, ರಾಯಚೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ರಾಮನಗರ ಮುಂತಾದ ಕಡೆಯಲ್ಲೆಲ್ಲ ೧೯೮೮ ರಿಂದ ಶಾಲಾ ಕಾಲೇಜುಗಳಲ್ಲಿ ದ.ರಾ. ಬೇಂದ್ರೆ ಕವನ ಗಾಯನ ಸ್ಪರ್ಧೆ ಏರ್ಪಡಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಸಹಸ್ರಾರು ದ.ರಾ. ಬೇಂದ್ರೆಯವರ ಕವನ ಸಂಕಲಗಳನ್ನು ಬಹುಮಾನವಾಗಿ ನೀಡಿರುವುದು. ಬೇಂದ್ರೆ ಕಾವ್ಯ ಕುರಿತು ಉಪನ್ಯಾಸ ಮಾಡಿರುವುದು, ದಕ್ಷಿಣದ ಕೆ.ಜಿ.ಎಫ್.ನ ದೊಡ್ಡಪೊನ್ನಾಂಡಹಳ್ಳಿ, ಚಾಮರಾಜನಗರದ ಗುಂಡ್ಲುಪೇಟೆಯಿಂದ - ಉತ್ತರದ ತುಟ್ಟತುದಿಯ ಬೀದರದ ಕಮಲನಗರದವರೆಗೆ ನಾಡಿನಾದ್ಯಂತ ೫೫೦ ಕ್ಕೂ ಹೆಚ್ಚು ಬೇಂದ್ರೆ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಿರುವುದು.

• ೨೦೦೭ ರಲ್ಲಿ ಬೆಂಗಳೂರಿನಲ್ಲಿ ದ.ರಾ. ಬೇಂದ್ರೆ ಕಾವ್ಯಕೂಟ (ರಿ) ಸ್ಥಾಪಿಸಿ ಅಧ್ಯಕ್ಷರಾಗಿ, ಕಳೆದ ೧೧ ವರ್ಷಗಳಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ವಿಮರ್ಶಾ ಲೇಖನ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಿರುವುದು (ನಗದು ಹಣ - ಮೊದಲ ಬಹುಮಾನ ರೂ. ೪೦೦೦, ಎರಡನೆ ಬಹುಮಾನ ರೂ. ೩೦೦೦, ಮೂರನೆ ಬಹುಮಾನ ರೂ. ೨೦೦೦) ಬೇಂದ್ರೆ ಹುಟ್ಟುಹಬ್ಬ ಆಚರಿಸುವುದು. ಬೇಂದ್ರೆ ಕಾವ್ಯಾಭಿಮಾನಿಗಳೊಬ್ಬರನ್ನು ಗೌರವಿಸುವುದು.

• ಮೈಸೂರಿನ ಧ್ವನ್ಯಾಲೋಕದಲ್ಲಿ ದ.ರಾ. ಬೇಂದ್ರೆಯವರ ‘ಜಾತ್ರೆ’ ನಾಟಕ ನಿರ್ದೇಶಿಸಿ ಪ್ರದರ್ಶಿಸಿರುವುದು.

• “ಕುಣಿಯೋಣು ಬಾರ ಬೇಂದ್ರೆಯೊಡನೆ” ರೂಪಕ ರಚಿಸಿ, ರಂಗಾಯಣದ ಸಹೃದಯ ಕಲಾವಿದರಾದ ಶ್ರೀ ಮೈಮ್ ರಮೇಶ್, ಶ್ರೀ ಪ್ರಶಾಂತ ಹಿರೇಮಠ್, ಶ್ರೀ ಶ್ರೀನಿವಾಸ ಭಟ್, ಶ್ರೀ ಸುಭಾಷ್ ಕುಸನೂರು ಅವರ ನಿರ್ದೇಶನ, ಮಾರ್ಗದರ್ಶನದಲ್ಲಿ ೨೨ ಮಕ್ಕಳಿಂದ ರೂಪಕ ಪ್ರದರ್ಶನ- ಮೈಸೂರಿನ ಧ್ವನ್ಯಾಲೋಕ ಮತ್ತು ಸಿ.ಎಫ್.ಟಿ.ಆರ್.ಐ.ನಲ್ಲಿ (೧೯೯೭)

• ಕಂಸಾಳೆಯಲ್ಲಿ ಬೇಂದ್ರೆ ಕಾವ್ಯ ಪ್ರಯೋಗ (೧೯೯೬)

• ಬೇಂದ್ರೆ ಫೆಲೋಷಿಪ್ ೨೦೦೩. ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಧಾರವಾಡದವರು ನೀಡುವ ಫೆಲೋಷಿಪ್ ಪಡೆದು (ರೂ. ೨೫೦೦೦) “ಅಂಬಿಕಾತನಯದತ್ತರ ಬಾಲ್ಯಕಾಂಡ’ದ ಅಧ್ಯಯನ. ಅದರ ಕೃತಿರೂಪ: ಬರೆಹದಲ್ಲಿ ಬೇಂದ್ರೆಯವರ ಬದುಕು. ಪ್ರಕಟಣೆ - ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್, ಧಾರವಾಡ (೨೦೦೮)

ಪ್ರಶಸ್ತಿಗಳು :

   • ಕನ್ನಡ ಪುಸ್ತಕ ಪ್ರಾಧಿಕಾರದಿಂದ ೨೦೧೧ ರ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ.

   • ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಧಾರವಾಡದಿಂದ ೨೦೧೪ ರಲ್ಲಿ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ.

   • ಬೆಂಗಳೂರು ಮಹಾನಗರ ಪಾಲಿಕೆಯಿಂದ ೨೦೧೪ ರಲ್ಲಿ ಕೆಂಪೇಗೌಡ ಪ್ರಶಸ್ತಿ.

   • ಉದಯಭಾನು ಕಲಾಸಂಘದವರಿಂದ "ಸಾಹಿತ್ಯ ರತ್ನ" ಪಶಸ್ತಿ

ಕೃತಿಗಳು :
   ೧) ಹಾಡು ಹಕ್ಕಿ ಅಂಬಿಕಾತನಯದತ್ತ (೧೯೯೫) ಮೂರನೇ ಆವೃತ್ತಿ-೨೦೧೨
   ೨) ಡಿ.ಆರ್. ಬೇಂದ್ರೆ (೧೯೯೭) ಮೈಸೂರು ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಆಂಗ್ಲಕೃತಿ
   ೩) ನಾಕುತಂತಿ-ಒಂದು ಟಿಪ್ಪಣಿ (೨೦೦೦) ಮೂರನೇ ಆವೃತ್ತಿ-೨೦೧೨
   ೪) ರಸ್ತೆ ನಿಯಮಗಳು (೨೦೦೦) ಮೈಸೂರು ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಕೃತಿ, ಐದನೇ ಆವೃತ್ತಿ ೨೦೧೫
   ೫) ಹೂತಽದ ಹುಣಸಿ (ದ.ರಾ. ಬೇಂದ್ರೆ ಕಾವ್ಯ ವಿಮರ್ಶೆ) ೨೦೦೦. ಎರಡನೇ ಆವೃತ್ತಿ ೨೦೧೧
   ೬) ಬೇಂದ್ರೆಯವರ ಸಾಹಿತ್ಯದಲ್ಲಿ ಸ್ತ್ರೀ-ಒಂದು ಅಧ್ಯಯನ (ಪಿ ಎಚ್ಡಿ ಮಹಾಪ್ರಬಂಧ) ೨೦೦೧, ಎರಡನೇ ಆವೃತ್ತಿ ೨೦೧೩
   ೭) ಬರೆಹದಲ್ಲಿ ಬೇಂದ್ರೆಯವರ ಬದುಕು (೨೦೦೮) ಡಾ.ದ.ರಾ.ಬೇಂದ್ರೆರಾಷ್ಟ್ರೀಯಟ್ರಸ್ಟ್‌ ಧಾರವಾಡ ಪ್ರಕಟಿಸಿರುವ ಕೃತಿ
   ೮) ಅಂತರಂಗದತ್ತ ನಯನ (ವಿಮರ್ಶಾ ಲೇಖನಗಳು) (೨೦೧೦)
   ೯) ಮಹಾಕವಿ ಲಕ್ಷ್ಮೀಶನ ಜೈಮಿನಿ ಭಾರತವನ್ನು ಸರಳಗದ್ಯದಲ್ಲಿ ರಚಿಸಿರುವುದು. ಅದು “ಮತ್ತೆ ಮಹಾಭಾರತ” ಎಂಬ ಹೆಸರಿನಲ್ಲಿ ನಾಡಿನ ಹೆಸರಾಂತ ವಾರಪತ್ರಿಕೆ “ಸುಧಾ”ದಲ್ಲಿ ಧಾರವಾಹಿಯಾಗಿ ೨೨-೯-೨೦೧೧ ರಿಂದ ೧೫-೧೨-೨೦೧೧ ರವರೆಗೆ ೧೪ ವಾರಗಳು ಪ್ರಕಟಗೊಂಡಿತು. ಕೃತಿ ರೂಪ: ಮಹಾಕವಿ ಲಕ್ಷ್ಮೀಶನ ವಚನ ಜೈಮಿನಿ ಭಾರತ (೨೦೧೨ )
   ೧೦) ಮಹಾಕವಿ ಹರಿಹರನ ಗಿರಿಜಾ ಕಲ್ಯಾಣವನ್ನು ಸರಳಗದ್ಯದಲ್ಲಿ ರಚಿಸಿರುವುದು. ಅದು “ಸುಧಾ” ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ೬-೧೨-೨೦೧೨ ರಿಂದ ೨೪-೧-೨೦೧೩ ರವರೆಗೆ ೯ ವಾರಗಳು ಪ್ರಕಟಗೊಂಡಿತು. ಕೃತಿರೂಪ: ಮಹಾಕವಿ ಹರಿಹರನ ಗಿರಿಜಾ ಕಲ್ಯಾಣ (೨೦೧೪)
   ೧೧) ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ (೨೦೧೬)
   ೧೨) ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದ ಎಂ.ಎ ಪದವಿಗೆ "ನಾದಲೀಲೆ" ಎಂಬ ಬೇಂದ್ರೆ ಪಠ್ಯದ ಮೇಲೆ ವಿದ್ಯಾರ್ಥಿಗಳಿಗೆ ಅಧ್ಯಯನ ಪಾಠಗಳನ್ನು ಬರೆದು ಕೊಟ್ಟಿರುವುದು. ಕೃತಿರೂಪ: ತಿರುತಿರುಗಿಯು ಹೊಸತಾಗಿರಿ (ಬೇಂದ್ರೆಯವರ ನಾದಲೀಲೆಯ ಅಧ್ಯಯನ) (೨೦೧೫)
   ೧೩) ಮಹಾಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ಸರಳಗದ್ಯದಲ್ಲಿ ರಚಿಸಿರುವುದು. ಅದು “ಸುಧಾ” ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ೨೩-೧೦-೨೦೧೪ ರಿಂದ ೧೮-೧೨-೨೦೧೪ ರವರೆಗೆ ೯ ವಾರಗಳು ಪ್ರಕಟಗೊಂಡಿತು. ಕೃತಿರೂಪ: ರಾಘವಾಂಕನ ಮಹಾಕವಿಯ ಹರಿಶ್ಚಂದ್ರ ಚಾರಿತ್ರ (೨೦೧೬)
   ೧೪) ಸಂತಕವಿ ಕನಕದಾಸರ ನಳಚರಿತ್ರೆಯನ್ನು ಸರಳಗದ್ಯದಲ್ಲಿ ರಚಿಸಿರುವುದು. ಅದು “ಸುಧಾ” ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ೬-೧೨-೨೦೧೬ ರಿಂದ ೨೬-೧-೨೦೧೭ ರವರೆಗೆ ೮ ವಾರಗಳು ಪ್ರಕಟಗೊಂಡಿತು. ಕೃತಿರೂಪ: ಸಂತಕವಿ ಕನಕದಾಸರ ನಳದಮಯಂತಿ ಪ್ರೇಮಕಥೆ (೨೦೧೭)

ವಿಚಾರ ಸಂಕಿರಣ : “ಡಾ. ಜಿ. ಕೃಷ್ಣಪ್ಪ ಅವರ ಸಾಹಿತ್ಯ ಕುರಿತು ವಿಚಾರ ಸಂಕಿರಣ”ವನ್ನು ಉದಯಭಾನು ಕಲಾಸಂಘ, ಬೆಂಗಳೂರು ಅವರು ತಾ.೨೯-೩-೨೦೧೩ ರಂದು ನಡೆಸಿದರು.

ಪ್ರಂಬಧಗಳ ಕೃತಿರೂಪ: ಕಾವ್ಯ ಶೋಧಕ

ಕಾವ್ಯಗಂಗೆ-ಅಂಕಣಬರಹ : ಬೋಧಿವೃಕ್ಷ (ವಿಜಯಕರ್ನಾಟಕ) ಪತ್ರಿಕೆಯಲ್ಲಿ ಬೇಂದ್ರೆ ಕಾವ್ಯಕುರಿತ ೨೫ ಲೇಖನಗಳು ೧೫-೪-೨೦೧೭ ರಿಂದ ೨೯-೯-೨೦೧೭ ರವರೆಗೆ ಪ್ರಕಟವಾಗಿದೆ

ಇವರದು ಕನ್ನಡ ನಾಡಿನ ಸಾಹಿತ್ಯ ಸಂಸ್ಕೃತಿಗೆ ವಿಶಿಷ್ಟ ಸಂಕೀರ್ಣ ರೀತಿಯ ಸೇವೆಯಾಗಿದೆ.